Nimma mechugeya Kannada haadugalu

Discussion in 'Karnataka' started by mouli_7, Dec 9, 2008.

  1. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Ellaroo elli hodri? mostly preeti vishya anno topic ishTa agilvo hege? :)

    Sari naan kaayita irtini ellarigu banni bega..

    Ivattu swalpa biDuvu...so swalpa songs share madta idini enjoy maaDi

    **************************************************
    ಚಿತ್ರ: ಹೊಂಬಿಸಿಲು (೧೯೭೮)
    ಗಾಯನ: ಎಸ್.ಜಾನಕಿ
    ಸಂಗೀತ: ರಾಜನ್-ನಾಗೇಂದ್ರ
    ಸಾಹಿತ್ಯ: ಗೀತಪ್ರಿಯ


    Link: YouTube - hoovinda hoovige - hombisilu
    *********************************************
    ಹೂವಿಂದ ಹೂವಿಗೆ ಹಾರುವ ದುಂಬಿ
    ಏನನು ಹಾಡುತಿಹೆ ನೀ ಏನನು ಹಾಡುತಿಹೆ ||
    ಹೂವಿಂದ ಹೂವಿಗೆ ಹಾರುವ ದುಂಬಿ
    ಏನನು ಹಾಡುತಿಹೆ ನೀ ಏನನು ಹಾಡುತಿಹೆ ||

    ಹೂವಿನ ಕೋಮಲ ಭಾವನೆ ಕೆಣಕಿ
    ಏತಕೆ ಕಾಡುತಿಹೇ ನೀ … ||

    ಹೂವಿಂದ ಹೂವಿಗೆ ಹಾರುವ ದುಂಬಿ
    ಏನನು ಹಾಡುತಿಹೆ ನೀ ಏನನು ಹಾಡುತಿಹೆ ||

    ಆ…ಆ…ಆ… ಆ…ಆ…ಆ…
    ಆ…..ಆ…..ಆ….ಆ…..

    ಆಸೆಯ ತುಂಬಿ ಹೂವರಳಿರಲು
    ಹೂವನು ಕಂಡು ನೀ ಕೆರಳಿರಲು
    ಹೂವಿನ ಅಂದ ನಿನಗೇ ಚಂದ
    ಮಧು ಮಕರಂದ ನಿನಗಾನಂದ
    ಒಲಿಸುವ ರಾಗವ ನೀ ಉಲಿಉಲಿದು
    ಒಲಿಸುವ ರಾಗವ ನೀ ಉಲಿಉಲಿದು
    ಏನನು ಬಯಸುತಿಹೆ ನೀ………

    ಹೂವಿಂದ ಹೂವಿಗೆ ಹಾರುವ ದುಂಬಿ
    ಏನನು ಹಾಡುತಿಹೆ ನೀ ಏನನು ಹಾಡುತಿಹೆ ||
    ಹೂವಿಂದ ಹೂವಿಗೆ ಹಾರುವ ದುಂಬಿ……

    ದುಂಬಿಯೆ ನಿನಗೆ ಮಿಲನಕೆ ಸಂಭ್ರಮ
    ಹೂವಿಗೆ ಬೇಕೋ ಪ್ರೇಮ ಸಮಾಗಮ
    ಹೂವಿಗು ದುಂಬಿಗು ಇರುವಾ ಬಂಧ
    ಸಮರಸವಿದ್ದರೆ ಸವಿರಾಗಬಂಧ
    ಈ ಅನುರಾಗವ ಅರಿಯದೆ ಇಂದು
    ಈ ಅನುರಾಗವ ಅರಿಯದೆ ಇಂದು
    ಏನನು ಬೇಡುತಿಹೆ ನೀ……..

    ಹೂವಿಂದ ಹೂವಿಗೆ ಹಾರುವ ದುಂಬಿ
    ಏನನು ಹಾಡುತಿಹೆ ನೀ ಏನನು ಹಾಡುತಿಹೆ ||

    ಹೂವಿನ ಕೋಮಲ ಭಾವನೆ ಕೆಣಕಿ
    ಏತಕೆ ಕಾಡುತಿಹೇ ನೀ … ||

    ಹೂವಿಂದ ಹೂವಿಗೆ ಹಾರುವ ದುಂಬಿ


    ***********************************

    ಈ ಹಾಡು ನನಗೆ ತುಂಬಾ ಇಷ್ಟ ಆಗುತ್ತೆ ಗೊತ್ತಿಲ್ಲ ಕಾರಣ :)
    ನನಗೆ ಈ ಹಾಡಿನ tune ಇಷ್ಟ ಆಗುತ್ತೆ
     
    Last edited: Mar 4, 2009
  2. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಚಿತ್ರ: ಅಣ್ಣಯ್ಯ
    ಸಾಹಿತ್ಯ/ಸಂಗೀತ: ಹಂಸಲೇಖ
    ಗಾಯಕ : ಎಸ್.ಪಿ.ಬಿ

    *********************************
    ಅಮ್ಮ..ಊರೇನೆ ಅಂದರು
    ನೀ ನನ್ನ ದೇವರು

    ಅಮ್ಮಯ್ಯ ಅಮ್ಮಯ್ಯ ಬಾರೆ
    ಅಕ್ಕರೆ ಸಕ್ಕರೆ ತಾರೆ
    ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ

    ಅಮ್ಮಯ್ಯ ಅಮ್ಮಯ್ಯ ಬಾರೆ
    ಅಕ್ಕರೆ ಸಕ್ಕರೆ ತಾರೆ
    ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ

    ಹೂವಿಗು ಹಣ್ಣಿಗು ಭೂಮಿ ದೇವರು
    ನೋವಿಗು ನಲಿವಿಗು ತಾಯಿ ದೇವರು


    ಈ ಜಗವೆ ...ತಾಯಿಗೆ ತೊಟ್ಟಿಲು..ನಾವೆಲ್ಲ ಮಕ್ಕಳು
    ಆ ಸುರರು...ತಾಯಿಗೆ ದಾಸರು...ಮಾತಿಗೆ ತಪ್ಪರು
    ಸತ್ಯಕೆ ಸಾಕ್ಷಿ..ಸುಳ್ಳಿಗೆ ಶೂಲ...ತಾಯಾಣೆ...ತಾಯಾಣೆ

    ಅಮ್ಮ..ಊರೇನೆ ಅಂದರು
    ನೀ ನನ್ನ ದೇವರು

    ಜಗಕೆ ಮುಕ್ಕೋಟಿ ದೇವರು
    ನೀ ನನ್ನ ದೇವರು

    ಜ್ಞಾನಕು ದೊಡ್ಡದು ಮಣ್ಣಿನ ಋಣ
    ಪ್ರಾಣಕು ದೊಡ್ಡದು ತಾಯಿಯ ಋಣ


    ಓ ಜನನಿ..ಜೀವಕ್ಕೆ ಮೂಲ ನೀ...ತ್ಯಾಗಕ್ಕೆ ಕಳಷ ನೀ
    ಓ ಜನನಿ..ಎಲ್ಲಕ್ಕು ಮೊದಲು ನೀ...ಪ್ರೇಮಕ್ಕೆ ಕಡಲು ನೀ

    ಮಾನಕೆ ರೂಪ..ಮನಸಿಗೆ ದೀಪ
    ನಿನ್ನ ಮುಖ..ನಿನ್ನ ಮುಖ

    ಅಮ್ಮ..ಯಾರೇನೆ ಅಂದರು
    ನೀ ನನ್ನ ದೇವರು

    ಜಗಕೆ ಮುಕ್ಕೋಟಿ ದೇವರು
    ನೀ ನನ್ನ ದೇವರು

    ಜ್ಞಾನಕು ದೊಡ್ಡದು ಅನ್ನದ ಋಣ
    ಧ್ಯಾನಕು ದೊಡ್ಡದು ಅಮ್ಮನ ಋಣ

    ಅಮ್ಮಯ್ಯ ಅಮ್ಮಯ್ಯ ಬಾರೆ
    ಅಕ್ಕರೆ ಸಕ್ಕರೆ ತಾರೆ
    ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ

    ಅಮ್ಮಯ್ಯ ಅಮ್ಮಯ್ಯ ಬಾರೆ
    ಅಕ್ಕರೆ ಸಕ್ಕರೆ ತಾರೆ
    ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ

    ಹೂವಿಗು ಹಣ್ಣಿಗು ಭೂಮಿ ದೇವರು
    ನೋವಿಗು ನಲಿವಿಗು ತಾಯಿ ದೇವರು


    ************************************************************

    "My mom is a neverending song in my heart of comfort, happiness, and being. I may sometimes forget the words but I always remember the tune"

    ಅಮ್ಮ ... ಈ ಪದನೆ ಎಷ್ಟು ಸುಂದರ ಅಲ್ವ..? ನನಗೆ ಯಾವಾಗಲು ಅಪ್ಪ ನೆ ಬೇಕು!!! ಆದ್ರೆ ಅಮ್ಮಗೆ ಅಂತ ಒಂದು ವಿಶಿಷ್ಟ ಜಾಗ ಯಾವಾಗಲೂ ನನ್ನ ಹೃದಯದಲ್ಲಿ ಇದ್ದೆ ಇರುತೆ
     
    Last edited: Mar 4, 2009
  3. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಸಾಹಿತ್ಯ: ಗೋಪಾಲ ಕೃಷ್ಣ ಆಡಿಗ
    ಸಂಗೀತ : ಮನೋಮೂರ್ತಿ
    ಚಿತ್ರ : ಅಮೆರಿಕ ಅಮೆರಿಕ
    ಗಾಯಕರು : ರಾಜು ಅನಂತಸ್ವಾಮಿ, ಸಂಗೀತ


    Listen here: http://www.youtube.com/watch?v=mCJlsoD5f-4

    ***********************************************

    ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

    ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
    ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗಣ

    ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

    ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ
    ಮೊರೆಯದಲೆಗಲ ಮೂಕ ಮರ್ಮರ ಇಂದು ಇಲ್ಲಿಗು ಹಾರಿತೆ

    ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

    ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ
    ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ

    ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು


    ****************************************************************************
    ಕೆಲವೊಂದು ಹಾಡಿಗೆ ಪೂರ್ಣ ಅರ್ಥ ಹುಡುಕೋದು ಕಷ್ಟ .... ಈ ಹಾಡಿನ ಸಂಪೂರ್ಣ ಅರ್ಥ ನಂಗೆ ಇನ್ನು ತಿಳಿದಿಲ್ಲ ಬಟ್ ತುಂಬಾ ಇಷ್ಟ ಈ ಗೀತೆ
     
    Last edited: Mar 4, 2009
  4. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಸಾಹಿತ್ಯ : ಪುರಂದರದಾಸರು
    ಸಂಗೀತ : ವಿಜಯಭಾಸ್ಕರ್
    ಗಾಯಕಿ : ಎಸ್. ಜಾನಕಿ
    ಚಿತ್ರ : ಉಪಾಸನೆ


    Link: YouTube - Upasane - Aachaaravilada naalige

    ********************************************************************
    ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ
    ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ
    ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂತಾ ನಾಲಿಗೆ

    ಚಾಡಿಹೇಳಲು ಬೇಡ ನಾಲಿಗೆ ನಿನ್ನ ಬೇಡಿಕೊಂಬೆನು ನಾಲಿಗೆ - 2
    ರೂಢಿಗೊಡೆಯ ಶ್ರೀರಾಮನನಾಮವ ಪಾಡುತಲಿರು ಕಂಡ್ಯ ನಾಲಿಗೆ

    ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ

    ಹರಿಯಸ್ಮರಣೆ ಮಾಡು ನಾಲಿಗೆ ನರಹರಿಯ ಭಜಿಸು ಕಂಡ್ಯ ನಾಲಿಗೆ - 2
    ವರದ ಪುರಂದರ ವಿಠ್ಠಲರಾಯನ ವರದ ಪುರಂದರ ವಿಠ್ಠಲರಾಯನ ಚರಣಕಮಲನೆನೆ ನಾಲಿಗೆ

    ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ
    ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂತಾ ನಾಲಿಗೆ
     
  5. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female

    ಚಿತ್ರ : Excuse Me
    ಸಾಹಿತ್ಯ : ಪ್ರೇಮ್
    ಸಂಗೀತ : ಅರ್.ಪಿ.ಪಟ್ನಾಯಕ್
    ಗಾಯಕಿ : ಬಾಂಬೆ ಜಯಶ್ರೀ


    Link: YouTube - Preethse antha praana thinno premi - Excuse me
    ***************************************************************

    ಪ್ರೀತ್ಸೆ ಅಂತ ಪ್ರಾಣ ತಿನ್ನೊ ಪ್ರೇಮಿ ನೀನು ಯಾರು?
    ನನ್ನೆ ಪ್ರೀತಿ ಮಾಡು ಅಂತ ಹೇಳಿಕೊಟ್ಟೊರ್*ಯಾರು?
    ಇದೆನೊ ನಿನ್ನ ನೋಟ.. ಇದೆನ ಪ್ರೀತಿ ಆಟ?..
    ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ?

    ಪ್ರೀತ್ಸೆ ಅಂತ ಪ್ರಾಣ ತಿನ್ನೊ ಪ್ರೇಮಿ ನೀನುಯಾರು?
    ನನ್ನೆ ಪ್ರೀತಿ ಮಾಡು ಅಂತ ಹೇಳಿಕೊಟ್ಟೊರ್ಯಾರು?

    ನೀನೆ ಮೊದಲನೆ ಬಾರಿಗೆ.. ಬಂದೆ ಹೃದಯದ ಊರಿಗೆ..
    ಇಳಿದೆ ಮನಸಿನ ಬೀದಿಗೆ ನೀನ್ಯಾರು?
    ನಮ್ಮ ಮೊದಲನೆ ಭೇಟಿಗೆ.. ನೀನು ತಿಳಿಸುವ ವೆಳೆಗೆ..
    ನಾನು ಬರುವುದು ಎಲ್ಲಿಗೆ ನೀನ್ಯಾರು?
    ನನ್ನ ನೋಡೆ ಅಂತ ಹಿಂದೆ ಅಲಿದೊನು ನೀನೆ ಎ..
    ನಿನ್ನ ನೊಡೊ ಆಸೆ ನನಗೆ ಬಾ ಬೇಗನೆ...

    ಪ್ರೀತ್ಸೆ ಅಂತ ಪ್ರಾಣ ತಿನ್ನೊ ಪ್ರೇಮಿ ನೀನು ಯಾರು?
    ನನ್ನೆ ಪ್ರೀತಿ ಮಾಡು ಅಂತ ಹೆಳಿಕೊಟ್ಟೋರ್ಯಾರು?

    ನೀನು ಕರಿಯುವೆ ನನ್ನನೆ.. ಹೇಗೆ ಇರುವುದು ಸುಮ್ಮನೆ..
    ನಾನು ಹುಡುಕಿದೆ ನಿನ್ನನೆ ನೀನ್ಯಾರು?
    ಎಲ್ಲ ಹುಡುಗರ ಕಣ್ಣನೆ.. ಕದ್ದು ನೋಡುವೆ ಮೆಲ್ಲನೆ..
    ಎಲ್ಲು ಕಾಣದ ಚೋರನೆ ನೀನ್ಯಾರು?
    ನಿನಗಗಿ ಕಾದೆ ನೀನೆತಕೆ ಬರದೆ ಹೋದೆ?
    ನೀನಿರದೆ ನಾಳೆ ಹೇ ಹುಡುಗ ನನಗೆನಿದೆ?

    ಪ್ರೀತ್ಸೆ ಅಂತ ಪ್ರಾಣ ತಿನ್ನೊ ಪ್ರೇಮಿ ನೀನು ಯಾರು?
    ನನ್ನೆ ಪ್ರೀತಿ ಮಾಡು ಅಂತ ಹೇಳಿಕೊಟ್ಟೊರ್ಯಾರು
    ಇದೇನೊ ನಿನ್ನ ನೋಟ.. ಇದೆನ ಪ್ರೀತಿ ಆಟ?..
    ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ?
     
  6. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಚಿತ್ರ : ಎರಡು ಕನಸು (೧೯೭೪)
    ಸಾಹಿತ್ಯ : ಚಿ.ಉದಯಶಂಕರ್
    ಸಂಗೀತ : ರಾಜನ್-ನಾಗೇಂದ್ರ
    ಗಾಯಕಿ : ಎಸ್.ಜಾನಕಿ


    Link: YouTube - poojisalende hoogala tande eradu kanasu
    **************************************************************
    ಆ......ಆ.......ಆ......
    ಪೂಜಿಸಲೆಂದೇ ಹೂಗಳ ತಂದೆ
    ಪೂಜಿಸಲೆಂದೇ ಹೂಗಳ ತಂದೆ
    ದರುಶನ ಕೋರಿ ನಾ ನಿಂದೇ...
    ತೆರೆಯೋ ಬಾಗಿಲನು ರಾಮ...
    ತೆರೆಯೋ ಬಾಗಿಲನು ರಾಮ...

    ಪೂಜಿಸಲೆಂದೇ ಹೂಗಳ ತಂದೆ


    ಮೋಡದಮೇಲೆ ಚಿನ್ನದ ನೀರು
    ಚೆಲ್ಲುತ ಸಾಗಿದೆ ಹೊನ್ನಿನ ತೇರು
    ಮಾಣಿಕ್ಯದಾರತಿ.....ಆ.....ಅ.....
    ಮಾಣಿಕ್ಯದಾರತಿ ಉಷೆತಂದಿಹಳು
    ತಾಮಸವೇಕಿನ್ನು ಸ್ವಾಮಿ....
    ತೆರೆಯೋ ಬಾಗಿಲನು ರಾಮ

    ಪೂಜಿಸಲೆಂದೇ ಹೂಗಳ ತಂದೆ
    ದರುಶನ ಕೋರಿ ನಾ ನಿಂದೇ...
    ಪೂಜಿಸಲೆಂದೇ ಹೂಗಳ ತಂದೆ


    ಒಲಿದರು ಚೆನ್ನ ಮುನಿದರು ಚೆನ್ನ
    ನಿನ್ನಾಸರೆಯೇ ಬಾಳಿಗೆ ಚೆನ್ನ
    ನಾ ನಿನ್ನ ಪಾದದ ಧೂಳಾದರೂ ಚೆನ್ನ - 2
    ಸ್ವೀಕರಿಸು ನನ್ನಾ...ಸ್ವಾಮಿ
    ತೆರೆಯೋ ಬಾಗಿಲನು ರಾಮ.....

    ಪೂಜಿಸಲೆಂದೇ ಹೂಗಳ ತಂದೆ
    ದರುಶನ ಕೋರಿ ನಾ ನಿಂದೇ...
    ತೆರೆಯೋ ಬಾಗಿಲನು ರಾಮ

    ಪೂಜಿಸಲೆಂದೇ ಹೂಗಳ ತಂದೆ....

     
  7. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Nanna PDra preetiya Haadu...sanje office inda bantu helta idru...so sari ade lyrics post madona anta madta idini. :)



    Movie Name : Aishwarya Year : 2006
    Music Director : Rajesh Ramnath
    Singer : Kunal Ganjawala
    Lyrics : K. Kalyan


    Link: movie- aishwarya

    ***********************************************************************************

    ಹುಡುಗಿ ಹುಡುಗಿ ನಿನ್ನ ಕಂಡಾಗ,
    ನನ್ನೇ ಮರೆತೇ ನಾನೀಗ,
    ಮನಸು ಮನುಸು ಮೆಚ್ಚಿಕೊಂಡಾಗ,
    ನಾನೇ ಇಲ್ಲ ನನಗೀಗ,
    ನೀನು ಬಳುಕಿ ನಡೆಯುವಾಗ, ಮೂಡ ಮಳೆಯು ಆಯಿತಿಗ,
    ನೀನು ನಕ್ಕು ನಲಿಯುವಾಗ, ಕಲ್ಲು ಶಿಲೆಗಳಾಯ್ತು ಈಗ,
    ನಿನ್ನಾಣೆ ಪ್ರಾಣ ಕೊಟ್ಟು ಪ್ರೀತಿ ಮಾಡುವೆ, ಪ್ರೀತ್ಸೆ........

    ತುಟಿಯಲ್ಲಿ ಇ ಸ್ಮೈಲು ಕಂಡ ಕೂಡಲೇ,
    ಎದ್ಹೆಯಲ್ಲಿ ಪ್ರೀತಿಯ ಚಿಲುಮೆ ಚಿಮ್ಮಿತು,
    ಕಣ್ಣಲ್ಲಿ ಸಿಹಿ ಲುಕ್ಕು ಕೊಟ್ಟ ಕೂಡಲೇ,
    ಮನಸೆಲ್ಲೋ ಗರಿ ಬಿಚ್ಚಿ ಹಾರಿ ಹೋಯಿತು,
    ನೀ ನಡೆಯೋ ದಾರಿಯೆಲ್ಲ ಹದಿನೇಳು ಚೈತ್ರ್ಯವಾಯ್ತು,
    ನೀ ಹಾಡೋ ಹಾಡಿನಿಂದ ಕವಿಗಳಿಗೆ ಉಸಿರು ಬಂತು,
    ನಿನ್ನ ಮೌನ ನೋಡಿ ತಾನೆ ಗಾಳಿ ಹಾಡ ಹಾಡಿತು,
    ನಿನ್ನ ಮಾತು ಕೇಳಿದೊಡನೆ ಕೋಗಿಲೆ ಕುಹೂ ಕಲಿಯಿತು,
    ಪ್ರೀತಿನ ಪ್ರೀತಿಯಿಂದ ಪ್ರೀತಿ ಮಾಡುವೆ ಪ್ರೀತ್ಸೆ........

    ಹುಡುಗಿ ಹುಡುಗಿ ನಿನ್ನ ಕಂಡಾಗ,
    ನನ್ನೇ ಮರೆತೇ ನಾನೀಗ,
    ಮನಸು ಮನುಸು ಮೆಚ್ಚಿಕೊಂಡಾಗ,
    ನಾನೇ ಇಲ್ಲ ನನಗೀಗ.......

    ಗಾಳಿಲಿ ನಿನ್ನ ಹೆಸರ ಕರೆದ ಕೂಡಲೇ,
    ಹೂವುಗಳು ಮೈ ನೆರೆದ ಕತೆಯು ಹುಟ್ಟಿತೆ,
    ಮಳೆಯೊಳಗೆ ನಿನ್ನ ಹಾಡ ನೆನೆದ ಕೂಡಲೇ,
    ಚಿಪ್ಪೊಳಗೆ ಮುತ್ತುಗಳ ಹೊಳಪು ಹುಟ್ಟಿತೆ,
    ನೀ ಸೂಕೋ ನೆಲದಲೆಲ್ಲ ಚಿಗುರುಗಳ ಹಬ್ಬವಂತೆ,
    ನೀ ತಾಕೋ ಕಡೆಯಲೆಲ್ಲ ಇಬ್ಬನಿಯ ದಿಬ್ಬವಂತೆ,
    ನಿನ್ನ ಮೊನಾಲಿಸ ನಗೆಯ ನಾ ಕದಿಯೋ ಸಲುವಾಗಿ,
    ಪ್ರೀತಿ ತುಂಬಿಕೊಂಡ ಎದೆಯ ನಾ ಸೇರೋ ಕ್ಷಣಕಾಗಿ,
    ಮನಸಾರೆ ಸೋತು ಬಂದೆ ಒಮ್ಮೆ ಒಪ್ಪಿಕೊ, ಪ್ರೀತ್ಸೆ.....

    ಹುಡುಗಿ ಹುಡುಗಿ ನಿನ್ನ ಕಂಡಾಗ,
    ನನ್ನೇ ಮರೆತೇ ನಾನೀಗ,
    ಮನಸು ಮನುಸು ಮೆಚ್ಚಿಕೊಂಡಾಗ,
    ನಾನೇ ಇಲ್ಲ ನನಗೀಗ.......
    ನೀನು ಬಳುಕಿ ನಡೆಯುವಾಗ, ಮೂಡ ಮಳೆಯು ಆಯಿತಿಗ,
    ನೀನು ನಕ್ಕು ನಲಿಯುವಾಗ, ಕಲ್ಲು ಶಿಲೆಗಳಾಯ್ತು ಈಗ,
    ನಿನ್ನಾಣೆ ಪ್ರಾಣ ಕೊಟ್ಟು ಪ್ರೀತಿ ಮಾಡುವೆ, ಪ್ರೀತ್ಸೆ........
     
  8. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಚಿತ್ರ : ಒಲವು ಗೆಲುವು (1977)
    ಸಂಗೀತ: ಜಿ.ಕೆ.ವೆಂಕಟೇಶ್
    ಗಾಯನ: ಎಸ್. ಜಾನಕಿ
    ಸಾಹಿತ್ಯ : ಉದಯಶಂಕರ್


    Listen: KannadaAudio.com ::: Olavu Gelavu (1977)

    Second song :thumbsup Enjoy
    *********************************************************************************************
    ನನ್ನೆದೆ ಕೋಗಿಲೆಯಾ
    ಒಲವಿನ ಪಲ್ಲವಿಯಾ
    ದನಿಯಲಿ ವಿನೂತನ
    ಜೀವ ಭಾವ
    ನೀ ತ೦ದೆ


    ನನ್ನೆದೆ ಕೋಗಿಲೆಯಾ
    ಒಲವಿನ ಪಲ್ಲವಿಯಾ
    ದನಿಯಲಿ ವಿನೂತನ
    ಜೀವ ಭಾವ
    ನೀ ತ೦ದೆ


    ಏಕೋ ಏನೋ ಕಾಣೇ ನಾನು
    ಎದುರಲಿ ನೀನಿರಲು
    ಮನದಲಿ ಸ೦ತೋಷದ
    ಹೊನಲು ಹರಿಯಲೂ

    ಏಕೋ ಏನೋ ಕಾಣೇ ನಾನು
    ಎದುರಲಿ ನೀನಿರಲು
    ಮನದಲಿ ಸ೦ತೋಷದ
    ಹೊನಲು ಹರಿಯಲೂ

    ಕಾಣುತ ನಿನ್ನ೦ದ ಕಾಣದ ಆನ೦ದ
    ಹೊಸ ಹೊಸ ಬಯಕೆಯು
    ನಿನ್ನಿ೦ದ


    ನನ್ನೆದೆ ಕೋಗಿಲೆಯಾ
    ಒಲವಿನ ಪಲ್ಲವಿಯಾ
    ದನಿಯಲಿ ವಿನೂತನ
    ಜೀವ ಭಾವ
    ನೀ ತ೦ದೆ

    ತಾಳೂ ತಾಳು ನಲ್ಲ ನಿಲ್ಲು

    ತಾಳೂ ತಾಳು ನಲ್ಲ ನಾನು
    ಬರುವೆನು ನಿನ್ನೊಡನೆ
    ಕಾಡುವೆ ನನ್ನೇಕೆ ಹೀಗೆ ಸುಮ್ಮನೆ

    ತಾಳೂ ತಾಳು ನಲ್ಲ ನಾನು
    ಬರುವೆನು ನಿನ್ನೊಡನೆ
    ಕಾಡುವೆ ನನ್ನೇಕೆ ಹೀಗೆ ಸುಮ್ಮನೆ


    ಕಾಣದೆ ನಿನ್ನನ್ನು ಬಾಳೆನು ನಾನಿನ್ನು
    ತಾಳೆನು ವಿರಹದಾ
    ನೋವನ್ನು


    ನನ್ನೆದೆ ಕೋಗಿಲೆಯಾ
    ಒಲವಿನ ಪಲ್ಲವಿಯಾ
    ದನಿಯಲಿ ವಿನೂತನ
    ಜೀವ ಭಾವ
    ನೀ ತ೦ದೆ


    ***************************************************
    ಹೇಗಿದೆ ಹಾಡು ? Big Laugh ನಂಗೆ ಅಂತು ತುಂಬಾ ಇಷ್ಟ Janakiyavara expressions...easy rendering wah ... heloke padagalilla nanna bali. :bowdown
     
    1 person likes this.
  9. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಚಿತ್ರ : ಒಲವಿನ ಉಡುಗೊರೆ (೧೯೮೭)
    ಸಾಹಿತ್ಯ: ಆರ್.ಎನ್.ಜಯಗೋಪಾಲ್
    ಸಂಗೀತ: ಎಂ.ರಂಗರಾವ್
    ಗಾಯನ: ಪಿ.ಜಯಚಂದ್ರನ್


    Link: YouTube - Olavina Udugore - Olavina udugore (P. Jayachandran)

    **************************************************************
    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು

    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು
    ಹೃದಯವೇ ಇದಾ ಮಿಡಿದಿದೆ
    ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು

    ಪ್ರೇಮ ದೈವದ ಗುಡಿಯಂತೆ
    ಪ್ರೇಮ ಜೀವನ ಸುಧೆಯಂತೆ
    ಅಂತ್ಯ ಕಾಣದು ಅನುರಾಗ
    ಎಂದು ನುಡಿವುದು ಹೊಸ ರಾಗ
    ಒಲವು ಸಿಹಿ ನೆನಪು ಸಿಹಿ
    ಹೃದಯಗಳ ಮಿಲನ ಸಿಹಿ
    ಪ್ರೇಮವೇ ಕವನಾ ಮರೆಯದಿರು

    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು
    ಹೃದಯವೇ ಇದಾ ಮಿಡಿದಿದೆ
    ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು

    ತಾಜಮಹಲಿನ ಚೆಲುವಲ್ಲಿ
    ಪ್ರೇಮ ಚರಿತೆಯ ನೋಡಲ್ಲಿ
    ಕಾಳಿದಾಸನ ಪ್ರತಿಕಾವ್ಯ
    ಪ್ರೇಮ ಸಾಕ್ಷಿಯು ನಿಜದಲ್ಲಿ
    ಕವಿತೆ ಇದಾ ಬರೆದಿರುವೆ
    ಹೃದಯವನೆ ಕಳಿಸಿರುವೆ
    ಕೋಮಲಾ ಇದು ನೀ ಎಸಯದಿರು

    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು
    ಹೃದಯವೇ ಇದಾ ಮಿಡಿದಿದೆ
    ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು


    *******************************************************************************
    ಇದು ನನ್ನ ಅಕ್ಕಗೆ ತುಂಬಾ ಇಷ್ಟ ... ಈ month avara ಇದೆ :) I MISS HER :spin
     
  10. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಚಿತ್ರ : ಕರ್ಪೂರದ ಗೊಂಬೆ (೧೯೯೬)
    ಸಾಹಿತ್ಯ ಮತ್ತು ಸಂಗೀತ - ಹಂಸಲೇಖ
    ಗಾಯನ - ಚಿತ್ರ


    Link: Karpurada Gombe - Ramesh Arvind, Shruthi & Shwetha ::: KannadaAudio.com

    4th song. :thumbsup Enjoy

    *************************************************************************************************

    ಹೂ ಮಲ್ಲಿಗೆಯೆ ಹರಸಿ ಹಾಡುವೆ ನಿನಗೆ ನಾನು
    ಓ ಸಂಪಿಗೆಯೆ ವರವ ಬೇಡುವೆ ನಿನಗೆ ನಾನು

    ಮಧುರವಾಗಲಿ ಎಲ್ಲ
    ಸುಖದಿ ತೇಲಲಿ ಎಲ್ಲ
    ಇದೇ ಹಾಡುವೆ ಸದಾ
    ಇದೇ ಬೇಡುವೆ ಸದಾ

    ನಿನ್ನ ಮದುವೆ ಮಂಟಪ ನಾನೆ ಮಾಡಿರುವೆ
    ಒಳ್ಳೆ ವರ ತರುವೆ
    ಧಾರೆ ನಾನೆರೆವೆ

    ಮಲ್ಲಿ ಮದುವೆಗೆ ಮುಂಚೆಯೆ
    ಹಸೆ ಏರದು ಸಂಪಿಗೆ
    ಪ್ರೀತಿ ಮಾತಿನ ಕಂಪಿಗೆ
    ಸೋಲಲೇಬೇಕಿದೆ ಸಂಪಿಗೆ

    ಕಾಲ ನೋಡಲಿ ಎಲ್ಲ
    ಚೈತ್ರವಾಗಲಿ ಎಲ್ಲ
    ಇದೇ ಹಾಡುವೆ ಸದಾ
    ಇದೇ ಬೇಡುವೆ ಸದಾ

    ನಿನ್ನ ಕರುಳಿನ ಬಳ್ಳಿಗೆ
    ನಾನೇ ಮರವಮ್ಮ
    ನಾನೇ ಗುರುವಮ್ಮ
    ನಾನೇ ದೊಡ್ಡಮ್ಮ

    ಇದೋ ನಿನ್ನಯ ಮಗುವಿದು
    ನಿನ್ನ ಬಿಟ್ಟು ಹೋಗದು
    ನಿನ್ನ ಹೋಲುವ ಗೊಂಬೆಯ
    ನೋಡೋ ಕನಸಿದೆ ನನ್ನದು

    ಕಾಲ ನೋಡಲಿ ಎಲ್ಲಾ
    ಚೈತ್ರವಾಗಲಿ ಎಲ್ಲಾ
    ಇದೇ ಹಾಡುವೆ ಸದಾ
    ಇದೇ ಬೇಡುವೆ ಸದಾ

    ***********************************************************************************

    ಅಕ್ಕ ಅಂತ ನೆನಪು ಬಂದ್ರೆ ಈ ಹಾಡು ಕೂಡ ನೆನಪು ಬಂತು ...ಈ ಹಾಡು ನಮ್ಮ ಅಪ್ಪಗೆ ತುಂಬಾ ಇಷ್ಟ ...ಸೊ ನಾನು ನಮ್ಮ ಅಕ್ಕ ಇದನ್ನ ನಮ್ಮಿಬರ ಹಾಡು ಅಂತ ಇತ್ತಿಕೊಂದಿದಿವಿ ... ಈ ಹಾಡು ಎಲ್ಲಿ ಕೇಳಿದ್ರು ಅವಳು ನನ್ನ ನೆನಪು ಮಾಡ್ಕೋ ಬೇಕು ಮತ್ತೆ ನಾನು ಅವಳನ್ನ ಅಂತ :)

    Even dedication ಕೂಡ For each other

    I LOVE MY SIS :kiss
     

Share This Page