Nimma mechugeya Kannada haadugalu

Discussion in 'Karnataka' started by mouli_7, Dec 9, 2008.

  1. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    SONG OF THE DAY
    Tuesday, March 24, 2009

    ***********************************************
    ಗೀತೆ - ಅರಳುವ ಹುವೂಗಳೇ ಆಲಿಸಿರಿ
    ಚಲನಚಿತ್ರ : ಮೈ ಆಟೋಗ್ರಾಫ್ (2006)
    ಸಾಹಿತ್ಯ: ಕೆ. ಕಲ್ಯಾಣ್
    ಸಂಗೀತ: ಭರದ್ವಾಜ
    ಗಾಯಕರು : ಚಿತ್ರ


    Watch: YouTube - Araluva hoovugale aalisiri - My Autograph

    ***********************************************

    ಹೆಣ್ಣು : ಅರಳುವ ಹುವೂಗಳೇ ಆಲಿಸಿರಿ
    ಬಾಳೊಂದು ಹೋರಾಟ ಮರೆಯದಿರಿ
    ಬೆಳಗಿನ ಕಿರಣಗಳೇ.... ಬಣ್ಣಿಸಿರಿ
    ಇರುಳಿಂದೆ ಬೆಳಕುಂಟು ತೋರಿಸಿರಿ
    ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ
    ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ
    ಮನವೇ ಓ ಮನವೇ ನೀ ಅಳುಕದಿರು
    ಮಳೆಯೋ ಬರಸಿಡಿಲೋ ನೀ ನಡೆಯುತಿರು

    ಮನಸುಯೆಂಬ ಕನ್ನಡಿಯು ಹೊಡೆದು ಹೋಗಬಾರದು
    ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು
    ಯಾರಿಗಿಲ್ಲಿ ನೋವಿಲ್ಲಾ? ಯಾರಿಗಿಲ್ಲಿ ಸಾವಿಲ್ಲಾ?
    ಕಾಲಕಳೆದ ಹಾಗೆ ಎಲ್ಲಾ ಮಾಯವಾಗುವಂತದು
    ಉಳಿಪೆಟ್ಟು ಬೀಳುವಕಲ್ಲೇ ಶಿಲೆಯಾಗಿ ನಿಲ್ಲುವುದು
    ದಿನನೋವ ನುಂಗುವ ಜೀವವೇ ನೆಲೆಯಾಗಿ ನಿಲ್ಲುವುದು
    ಯಾರಿಗಿಲ್ಲ ಅಲೆದಾಟ ? ಯಾರಿಗಿಲ್ಲ ಪರದಾಟ ?
    ನಮ್ಮ ಪ್ರತಿ ಕನಸು ಇಲ್ಲಿ ನನಸಾಗೋ ಒಳ್ಳೇ ಕಾಲವು ಮುಂದೆ ಇದೆ

    ಮನವೇ ಓ ಮನವೇ ನೀ ಕುಗ್ಗದಿರು
    ಬೆಟ್ಟ ಬಯಲಿರಲಿ ನೀ ನುಗ್ಗುತಿರು

    ಅರಳುವ ಹುವೂಗಳೇ ಆಲಿಸಿರಿ
    ಬಾಳೊಂದು ಹೋರಾಟ ಮರೆಯದಿರಿ

    ನೋವು ನಲಿವು ಅನ್ನೋದು ಬಾಳ ರೈಲು ಕಂಬಿಗಳು
    ನಡುವೆ ನಮ್ಮದೀ... ಪಯಣ ನಗುತ ಸಾಗು ಹಗಲಿರುಳು
    ಏನೇ ಬರಲಿ ಬಾಳಿನಲಿ ಧ್ಯೇಯವೊಂದು ಜೊತೆಯಿರಲಿ
    ಏಳುಬೀಳು ಎಲ್ಲದಾಟಿ ಏಳುತೀವಿ ನಾವುಗಳು

    ಗಂಡು: ಅವಮಾನ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ
    ನಾವೆಲ್ಲರು ಎಂದು ಒಂದೆ ಆ ದೇವರ ಸೃಷ್ಟಿಯಲಿ

    ಹೆಣ್ಣು: ಬಾಳಿಗೊಂದು ಅರ್ಥವಿದೆ
    ಹೆಜ್ಜೆಗೊಂದು ದಾರಿಯಿದೆ
    ನಿನ್ನ ಆತ್ಮಬಲ ನಿನ್ನ ಜೊತೆಯಿರಲು ಆಕಾಶವೆ ಅಂಗೈಲಿ

    ಮನವೇ ಓ ಮನವೇ ನೀ ಬದಲಾಗು
    ಏನೇ ಸಾಧನೆಗೂ ನೀ ಮೊದಲಾಗು

    ಅರಳುವ ಹುವೂಗಳೇ ಆಲಿಸಿರಿ
    ಬಾಳೊಂದು ಹೋರಾಟ ಮರೆಯದಿರಿ
    ಬೆಳಗಿನ ಕಿರಣಗಳೇ ಬಣ್ಣಿಸಿರಿ
    ಇರುಳಿಂದೆ ಬೆಳಕುಂಟು ತೋರಿಸಿರಿ
    ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ
    ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ
    ಮನವೇ ಓ ಮನವೇ ನೀ ಅಳುಕದಿರು
    ಮಳೆಯೋ ಬರಸಿಡಿಲೋ ನೀ ನಡೆಯುತಿರು.
     
  2. revathis

    revathis Senior IL'ite

    Messages:
    266
    Likes Received:
    0
    Trophy Points:
    16
    Gender:
    Female
    RJ Chinnu ela haadugalu chenagide:thumbsup
    Nanadondu korike
    'chaitrada premanjali' chitradu yaava haadadaru paravagilla. Elavu chenagide adaralli. Title song kuda nadiyute :) adaralli bari sumave suma:)

    Revathi
     
  3. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Hello Revathiji... neevu kelidre nimma request illide noDi.

    Houdu e chitra ella geetegalu chenagide... golo haaDugalanna biTTu :)

    Ella suma suma..antane...but a song/a movie release aadaga keLbeDi nanna PaaDu...ella friends...scholl alli...cousins...ella ade haaDu nanna NoDidagella...eshTu embrass agta ittu gotta nange..eglu adanna nanna noDi haaDidre ayyo bonk anisutte :idea

    Listen to all songs - Chaitrada Premaanjali

    Listen: KannadaAudio.com ::: Chaitrada Premanjali

    http://www.musicindiaonline.com/music/kannada/s/movie_name.2298/


    ********************************************
    Title Song: ಚೈತ್ರದ ಪ್ರೇಮಾಂಜಲಿಯ
    ಚಲನಚಿತ್ರ : ಚೈತ್ರದ ಪ್ರೇಮಾಂಜಲಿ (1992)
    ಸಾಹಿತ್ಯ: ಹಂಸಲೇಖ
    ಸಂಗೀತ: ಹಂಸಲೇಖ
    ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ

    ********************************************

    ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
    ಗಂಧದ ಪರಿಮಳಕಿಂತ ಘಮ ಘಮ ಘಮ
    ಸುಮ ಘಮ
    ಘಮ ಘಮ

    ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
    ಗಂಧದ ಪರಿಮಳಕಿಂತ ಘಮ ಘಮ ಘಮ
    ಸುಮ ಘಮ
    ಘಮ ಘಮ

    ಮಲ್ಲಿಗೆಯ ಮಳ್ಳಿ ಚೆಲುವಿನಲಿ ಮೆಲ್ಲುಲಿಯ ಮೆಲ್ಲ ನಗುವಿನಲಿ
    ಸಂಪಿಗೆಯ ಸೊಂಪು ಕುರುಳಿನಲಿ ತಂಪಿಡುವ ಶಶಿಯ ವದನದಲಿ
    ಮಾತನಾಡೆ ಮಂದಾರ
    ನಿನ್ನ ಹೆಸರೆ ಶ್ರುಂಗಾರ ಓ......
    ಕನಕಾಂಬರಿ ಓ ನೀಲಾಂಬರಿ ನಿನಗೆ ನೀ ಸರಿ
    ಸೇವಂತಿಗೆ ಸೂಜೀ...ಮಲ್ಲಿಗೆ
    ಗಿಡವಾಗಿ ಎಲೆಯಾಗಿ ನಿನಗೆನಾ ಸರಿ

    ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
    ಗಂಧದ ಪರಿಮಳಕಿಂತ ಘಮ ಘಮ ಘಮ
    ಸುಮ ಘಮ
    ಸಮಾಗಮ...

    ಕಣ್ಣಲ್ಲಿ ನೀನು ಕಮಲವತಿ ಒಡಲಲ್ಲಿ ತಾಳೆ ಪುಷ್ಪವತಿ
    ಭಯವೇಕೆ ಅಂಜು ಮಲ್ಲಿಗೆಯೆ ಬಾ ಏಳು ಸುತ್ತು ಮಲ್ಲಿಗೆಯೆ
    ಪಾರಿಜಾತ ವರವಾಗು
    ಸೂರ್ಯ ಕಾಂತಿ ಬೆಳಕಾಗು ಓ.....
    ಮಧು ತುಂಬಿದ ಗುಲಾಬಿ ಸುಮ... ನಿನಗೆ ನೀ ಸಮ
    ನಶೆ ಏರಿಸೊ ಓ ರಜನಿ ಸುಮ
    ಹೂದಾನಿ ಅಭಿಮಾನಿ ನಿನಗೆ ನಾ ಸಮ

    ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ
    ಗಂಧದ ಪರಿಮಳಕಿಂತ ಘಮ ಘಮ ಘಮ
    ಸುಮ ಘಮ
    ಸಮಾಗಮ...
     
    Last edited: Mar 26, 2009
  4. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಗೀತೆ: ಓ ಕೋಗಿಲೆ ನಾ ಹಾಡಲೆ

    ಚಲನಚಿತ್ರ : ಚೈತ್ರದ ಪ್ರೇಮಾಂಜಲಿ (1992)
    ಸಾಹಿತ್ಯ: ಹಂಸಲೇಖ
    ಸಂಗೀತ: ಹಂಸಲೇಖ
    ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ


    **********************************************
    ಓ ಕೋಗಿಲೆ ಕೋಗಿಲೆ ಕೋಗಿಲೆ
    ನಾ ಹಾಡಲೆ ಹಾಡಲೆ ಹಾಡಲೆ

    ಭೂತಾಯಮ್ಮನ ಕೈಗೂ ಸಮ್ಮನ
    ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ
    ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ
    ಓ ಕೋಗಿಲೆ......... ನಾ ಹಾಡಲೆ.............

    ಒ೦ಟಿ ನಾನು ಮರಗಳೆ
    ಒ೦ಟಿ ನಾನು ಎಲೆಗಳೆ
    ಕೊಕ್ಕಿನಲ್ಲಿ ತಿ೦ಡಿಯ ಗುಟುಕು ನೀಡೊ ಹಕ್ಕಿಯೆ
    ಸ್ವಲ್ಪ ಉಳಿಸಿ ತಿನಿಸೆಯಾ..... ನನಗೂ ಹಸಿವಿದೆ
    ಕಾಣೆ ತಾಯಿ ಲಾಲಿಯ
    ಕಾಣೆ ತ೦ದೆ ಪ್ರೀತಿಯ
    ತಾಯ ಮಡಿಲ ಗಿಳಿಗಳೆ ತ೦ದೆ ನೆರಳ ಮರಿಗಳೆ
    ಬರಲೇ ನಾನು ಈಗಲೆ.....ನಿಮ್ಮಾ ಗೂಡಿಗೆ
    ಹಾರಲು ಬಾರದು ಆತುರ ತಾಳದು
    ಆನ೦ದದೀ ರಾಗವೆ ಸಾಗದು

    ಭೂತಾಯಮ್ಮನ ಕೈಗೂ ಸಮ್ಮನ
    ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ
    ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ
    ಓ ಕೋಗಿಲೆ.... ನಾ ಹಾಡಲೆ.......

    ಓ ಗಿಲ್ ಗಿಲಿಯಾ... :spin
    ಯಾವೋನಪ್ಪ ಯಾವೋನು ತಗಡಿನ್ ಡಬ್ಬಿ ತ೦ದೋನು bonk
    ವಟಮಟ ನೋಡೋನು ಪಟಗೀಟ ತೆಗ್ಯೋನು Big Laugh
    ಪಟ್ಟಾಪಟ್ಟಿ ಅ೦ಗ್ಡಿಯೋನು ರೈಲ್ವೆಪಟ್ಟಿ ಕ೦ಬ್ಯೋನು :idea
    ಹೋಟ್ಲಲ್ ಬ೦ದ ಬೂಟ್ಸೋನು ಬನ್ರೆ ಬನ್ರೆ ಜಾಡ್ಸೋಣು :hide:

    ಹರಿವ ನೀರು ನಿಲ್ಲದು
    ಇಲ್ಲಿ ಚಿ೦ತೆ ಉಳಿಯದು
    ತೊಳೆದು ಎಲ್ಲ ಕಹಿಗಳ ಸವಿದು ಕಾಡ ಸಿಹಿಗಳ
    ಎದೆಯ ತು೦ಬ ಹಸಿರಿನ.....ಬೆಳೆಯೇ ತೂರಿದೆ
    ಬೆಳ್ಳಿ ಹಕ್ಕಿ ಕಿರುದನಿ
    ಗಿರಿಗಳಿ೦ದ ಮರುದನಿ
    ರೆಕ್ಕೆ ಇರದ ಹುಲಿಗಳು ಅ೦ಕೆ ಇರದ ಕಲಿಗಳು
    ಕೂರಮೃಗದ ಸೈನ್ಯವೇ...... ಮರೆಯಲ್ಲೇ ಅಡಗಿದೆ
    ಎದೆಯಲಿ ನಡುಕವು ಜೊತೆಯಲಿ ಪುಳಕವು
    ಆನ೦ದದೀ ರಾಗವೇ ಸಾಗದು

    ಭೂತಾಯಮ್ಮನ ಕೈಗೂ ಸಮ್ಮನ
    ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ
    ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ
    ಓ ಕೋಗಿಲೆ..... ನಾ ಹಾಡಲೆ......
     
  5. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಗೀತೆ:ಓ ಮಲೆನಾಡಿನ ಮೈಸಿರಿಯೆ

    ಚಲನಚಿತ್ರ : ಚೈತ್ರದ ಪ್ರೇಮಾಂಜಲಿ (1992)
    ಸಾಹಿತ್ಯ: ಹಂಸಲೇಖ
    ಸಂಗೀತ: ಹಂಸಲೇಖ
    ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ಚಿತ್ರ


    ************************************************

    ಹೆಣ್ಣು : ಓ ಓ ಓ..............ಓ ಓ ಓ

    ಗಂಡು: ಓ ಓ ಓ..............ಓ ಓ ಓ

    ಗಂಡು: ಓ ಮಲೆನಾಡಿನ ಮೈಸಿರಿಯೆ
    ಆ ರವಿ ಜಾರಿತು ಹೂಗರಿಯೆ
    ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ
    ನೀಡುವೆ ನನ್ನೆನಾ ಮೆಚ್ಚಿನ ಚೆಲುವೆಗೆ

    ಹೆಣ್ಣು: ಓ ಮಲೆನಾಡಿನ ಮೈಸಿರಿಯೆ
    ಆ ರವಿ ಜಾರಿತು ಹೂಗರಿಯೆ
    ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ
    ನೀಡುವೆ ನನ್ನೆನಾ ಮೆಚ್ಚಿನ ಚೆಲುವಗೆ

    ಗಂಡು: ಓ ಮಲೆನಾಡಿನ ಮೈಸಿರಿಯೆ
    ಹೆಣ್ಣು: ಆ ರವಿ ಜಾರಿತು ಹೂಗರಿಯೆ

    ಗಂಡು: ಈ ಗ೦ಗೆಯ ಆಣೆಗೆ ಕೈಕೊಡು
    ಪನ್ನೀರಿನ ಮನಸಲಿ ಬರೆದಿಡು
    ಅ೦ತರಗ೦ಗೆ ನೀನು ನನ್ನ ಪ್ರೇಮಕೆ
    ಮ೦ದದ ಹೂವು ನಾನು ನಿನ್ನ ಸ್ನೇಹಕೆ.... ಮರೆಯಬೇಡವೆ

    ಹೆಣ್ಣು: ಓ ಮಲೆನಾಡಿನ ಮೈಸಿರಿಯೆ
    ಆ ರವಿ ಜಾರಿತು ಹೂಗರಿಯೆ

    ಹೆಣ್ಣು: ದೇವರ ಗುಡಿಯ೦ತೆ ವೇದದ ನುಡಿಯ೦ತೆ ನಾದದ ಅಲೆಯ೦ತೆ ಪ್ರೇಮವು...

    ಗಂಡು: ಮೇಘದ ಧ್ವನಿಯ೦ತೆ ವರ್ಷದ ಶರದ೦ತೆ ಧರಣಿಯ ಹಸಿರ೦ತೆ ಪ್ರೇಮವು....

    ಹೆಣ್ಣು:ಈ ದೇವರ ಆಣೆಗೆ ಕೈಕೊಡು
    ಈ ಜ್ಯೋತಿಯ ಕಣ್ಣಲಿ ನೆನಪಿಡು
    ಆತ್ಮಕ್ಕೆ ಸಾವು ಇಲ್ಲ ಎ೦ದು ತೋರಿಸು
    ಪ್ರೇಮಕ್ಕೆ ಸಾವು ಇಲ್ಲ ಎ೦ದು ಪ್ರೀತಿಸು..... ಮರೆಯಬೇಡವೊ

    ಗಂಡು: ಓ ಮಲೆನಾಡಿನ ಮೈಸಿರಿಯೆ
    ಆ ರವಿ ಜಾರಿತು ಹೂಗರಿಯೆ
    ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ
    ನೀಡುವೆ ನನ್ನೆನಾ ಮೆಚ್ಚಿನ ಚೆಲುವೆಗೆ

    ಹೆಣ್ಣು: ಓ ಮಲೆನಾಡಿನ ಮೈಸಿರಿಯೆ
    ಆ ರವಿ ಜಾರಿತು ಹೂಗರಿಯೆ
    ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ
    ನೀಡುವೆ ನನ್ನೆನಾ ಮೆಚ್ಚಿನ ಚೆಲುವಗೆ

    ಗಂಡು: ಓ ಮಲೆನಾಡಿನ ಮೈಸಿರಿಯೆ
    ಹೆಣ್ಣು: ಆ ರವಿ ಜಾರಿತು ಹೂಗರಿಯೆ
     
  6. ShubhaHM

    ShubhaHM Bronze IL'ite

    Messages:
    571
    Likes Received:
    3
    Trophy Points:
    33
    Gender:
    Female
    Hello " R J Chinnu "

    tumba thanks nanna haadanna haakiddakke ... " suma suma " haaDu chennagide :)

    innondu haaDu nenpaaytu ... " Preeti neenillade naanu hegirali " idu Bhava baamaida movie ansatte ... so " Suma Suma " haaDu aytu ... eega Preeti preeti haaDu .. eno idara tune nange ishTa ... so ee haaDanna Preeti yavarige heLi ...
     
  7. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Revatiji... :hiya nange e tara goLo haaDugaLu swalpa doorane...but nimge anta kashTa attu kelta idini Rant ayyo :spin yaar sad songs baritaaro... Hamsalekhane gottu bonk

    *********************************************
    ಗೀತೆ:ನನ್ನವರೇ ನನಗೆ ಕೊನೆಗೆ

    ಚಲನಚಿತ್ರ : ಚೈತ್ರದ ಪ್ರೇಮಾಂಜಲಿ (1992)
    ಸಾಹಿತ್ಯ: ಹಂಸಲೇಖ
    ಸಂಗೀತ: ಹಂಸಲೇಖ
    ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ಮಂಜುಳಾ ಗುರುರಾಜ್

    ***********************************************

    ಗಂಡು : ನನ್ನವರೇ...... ನನಗೆ ಕೊನೆಗೆ ಮುಳ್ಳಾದರೆದೆಗೆ
    ಕನಸುಗಳು ಕರಗಿದವು ಆಸೆಗಳು ಸೊರಗಿದವು ಮರುಗಿದವು

    ಹೆಣ್ಣು : ಅಂಜಿಕೆಯೆ ನನಗೆ ಕೊನೆಗೆ ಉರುಳಾಯಿತೆನಗೆ
    ನಂಬಿದರೆ ನಿಜವುಂಟು ಕಾಣಿಸದ ಕಥೆಯುಂಟು ವ್ಯಥೆಯುಂಟು

    ಓ .... ಓ ...ಓ ... bonk ಓ .... ಓ ...ಓ ..Big Laugh

    ಗಂಡು :ವಿನೋದದ ಆಲಿಂಗನ ವಿಲಾಸದ ಆ ಚುಂಬನ
    ನಾ ಮೈ ಮರೆತೆನು ಕರಿನಾಗದ ಗೆಳೆತನದೊಳಗೆ
    ನಾಕಣ್ತೆರೆಯೆಯುವ ಮೊದಲೇರಿತು ವಿಷ ಮೈಯೊಳಗೆ

    ಹೆಣ್ಣು : ಅಪಾಯದ ಬಲಾಬಲ ದುರಾಸೆಯ ಫಲಾಫಲ
    ಅದರರಿವಿಲ್ಲದೆ ಬರಿ ಪ್ರೇಮದ ಸವಿಯನು ಸವಿದೆ
    ಅ ದೇವರೆ.. ಈ ಅತಿ ಆಸೆಗೆ ಮಸಿಯನು ಬಳಿದೆ

    ಗಂಡು : ನನ್ನವರೇ...... ನನಗೆ ಕೊನೆಗೆ ಮುಳ್ಳಾದರೆದೆಗೆ
    ಕನಸುಗಳು ಕರಗಿದವು ಆಸೆಗಳು ಸೊರಗಿದವು ಮರುಗಿದವು

    ಓ .... ಓ ...ಓ ... bonk ಓ .... ಓ ...ಓ ..Big Laugh

    ಹೆಣ್ಣು: ವಿವಾಹವೇ ಪ್ರವಾಹವೊ ವಿಮೋಚನೆ ಇಲ್ಲಿಲ್ಲವೊ
    ಈ ಸುಳಿಅಲೆಯಲಿ ಎದುರೀಜಲು ಬಲ ಕುಸಿದಿದೆಯೊ
    ನಾ ಮುಳುಗಿರುವೆಡೆ ನಿಜವೆಲ್ಲವು ಒಳಗಡಗಿದೆಯೊ

    ಗಂಡು : ಓ ಸಾವೆ ನೀ ದಯಾಮಯ ಈ ನೋವಿಗೆ ತೋರು ದಯ
    ಈ ಬದುಕಿನ ಜೊತೆ ಬಯಸುವವರು ನಯ ವಂಚಕರೆ
    ಆ ಸವಿನುಡಿಯಲಿ ವಿಷ ಉಣಿಸುವ ಕೊಲೆಪಾತಕರೆ

    ಹೆಣ್ಣು : ಅಂಜಿಕೆಯೆ ನನಗೆ ಕೊನೆಗೆ ಉರುಳಾಯಿತೆನಗೆ
    ನಂಬಿದರೆ ನಿಜವುಂಟು :bang ಕಾಣಿಸದ ಕಥೆಯುಂಟು ವ್ಯಥೆಯುಂಟು

    ಗಂಡು : ನನ್ನವರೇ...... ನನಗೆ ಕೊನೆಗೆ ಮುಳ್ಳಾದರೆದೆಗೆ
    ಕನಸುಗಳು ಕರಗಿದವು ಆಸೆಗಳು ಸೊರಗಿದವು ಮರುಗಿದವು



    **********************************************
    KanDita neevu nange Thanks heLale beku e song ge :bangcomp:
     
  8. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Hi Shubha...kanDita ...a song kooDa nange ishTa "Preeti nee illade naa" nangu aa tune tumba IshTa :thumbsup KanDita HeLteeni.. nimma kDe inda dedication anta kooDa.

    inna Ravativara request mugidilla...nanna tale hogta ide... aa goLo song keLi Drowning

    Nantara hakteeni nimma request. Nimma new avathar...chenagide onda taraha...yava tara anta kelBedi...ashTu express maaDoke barola bonk
     
    Last edited: Mar 26, 2009
  9. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Hello Revati idara inna ondu version idya :shaking: ... ayyo rama .... plz help me say NO shakehead

    ಗೀತೆ: ದಾರಿ ಬಿಡು ವಿಧಿಯೇ :eek:mg: - Another version of ನನ್ನವರೇ ನನಗೆ ಕೊನೆಗೆ bonk

    ********************************************************
    ದಾರಿ ಬಿಡು ವಿಧಿಯೇ ವಿಧಿಯೇ
    ಕಾರುನಾಳುವಾಗಿ .....
    ಬದುಕಿರಲು ಮನಸಿಲ್ಲ
    ಬದುಕಿಸಲು ತಿಳಿದಿಲ್ಲ ಉಸಿರಿಲ್ಲ

    ಕರುಣೆ ಇಡು ವಿಧಿಯೇ ವಿಧಿಯೇ
    ಶುಭ ರಾಗವಾಗಿ ......................... beku andre haaktini yochane maaDi heLI plz :notthatway:
     
    Last edited: Mar 26, 2009
  10. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Appa so much relaxed naane kaledu hogidde kone eraDu goLo song keLi.. Sorry Revati... hope neevu saha goLo songs enu keLirlilla ankolteeni. :thumbsup

    Ega e song namma shubha kaDe inda namma preetiya Doctor Preethiyavarige...
    super aagide e song gotta? :) nangu tumba ishTa ee song...

    "Preeti Preeti ninna aaTa saaku niLLisu" anta inna ondu song ide Arasu chitradu kelideera? adu tumba sihTa nange.already post maaDdeeni a song na.

    adara link: http://www.indusladies.com/forums/597752-post154.html

    So keep listening to FM 82 with ur loving RJ Chinnu ...Suma ...Suma

    So shubha ur song comes....................here

    *******************************************
    ಗೀತೆ: ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ?

    ಚಿತ್ರ : ಬಾವ ಬಾಮೈದ (2001)
    ಸಾಹಿತ್ಯ ಮತ್ತು ಸಂಗೀತ : ಹಂಸಲೇಖ
    ಗಾಯಕರು : ಸೋನು ನಿಗಮ್ ಮತ್ತು ಚಿತ್ರ


    Watch: YouTube - Preethi neenillade naanu hegirali - Baava Baamaida

    ********************************************

    ಹೆಣ್ಣು: ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ?
    ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
    ನಿನಗಾಗಿ.... ನಿನಗಾಗಿ...
    ಈ ತನುಮನವೇ ನಿನಗಾಗಿ

    ಗಂಡು:ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ?
    ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
    ನಿನಗಾಗಿ.... ನಿನಗಾಗಿ...
    ಈ ತನುಮನವೇ ನಿನಗಾಗಿ

    ಹೆಣ್ಣು:ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ?
    ಗಂಡು:ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ

    ಹೆಣ್ಣು: ಮನಸಿನ ಮೌನ ಮಾತಾಯ್ತು
    ಅಹಾ..ಪ್ರೀತಿ ನಿನ್ನಿಂದ
    ಸುಖಿ ಆದೆ ನಿನ್ನಿಂದ

    ಗಂಡು: ಹೃದಯದ ರಾಯಭಾರವೆ
    ಅಹಾ..ಪ್ರೀತಿ ನಿನ್ನಿಂದ
    ಪ್ರಿಯಾ ಅದೆ ನಿನ್ನಿಂದ

    ಹೆಣ್ಣು: ಸಾಗರವು ಹುಣ್ಣಿಮೆಯು
    ಜಿಗಿಯುವುದೇ ಪ್ರೀತಿಸಲು

    ಗಂಡು: ಮಲ್ಲಿಗೆಯು ಗಂಧವು
    ಬೆರೆಯುವುದೇ ಪ್ರೀತಿಸಲು

    ಹೆಣ್ಣು & ಗಂಡು: ಪ್ರೀತಿ ನಿನ್ನ ಸ್ಮರಣೆಯಲಿ......
    ಅಧರಗಳು ಅರಳುವುದು
    ಚುಂಬಿಸುತ ಪ್ರೀತಿಸಲು

    ಹೆಣ್ಣು:ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ?
    ಗಂಡು:ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ

    ಗಂಡು: ಪ್ರೀತಿ ನಿನ್ನ ದಯದಿಂದ
    ಅಹಾ..ಅಂದ ಜಗವೆಲ್ಲ
    ಮಹಾನಂದ ಬದುಕೆಲ್ಲ....

    ಹೆಣ್ಣು: ಪ್ರೀತಿ ನಿನ್ನ ಇಂಪಿಂದ
    ಎಲ್ಲಾ ಮಾತು ಸಂಗೀತ
    ಸಿಹಿ ಜೇನು ಮನಸೆಲ್ಲ.....

    ಗಂಡು: ನೇಸರನ ಬಿಳಕು ಮಳೆ
    ಧರಣಿಯನು ಚಿಗುರಿಸಲು

    ಹೆಣ್ಣು: ದುಂಬಿಗಳ ಮಧು ಪ್ರೀತಿ
    ಹೂವುಗಳ ಸಂಧಿಸಲು

    ಹೆಣ್ಣು & ಗಂಡು: ಪ್ರೀತಿ ನಿನ್ನ ವರದಿಂದ......
    ಹೃದಯಗಳು ಮಿಡಿಯುವುದು
    ಭಯವಿರದೆ ಪ್ರೀತಿಸಲು

    ಗಂಡು:ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ?
    ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
    ನಿನಗಾಗಿ.... ನಿನಗಾಗಿ...
    ಈ ತನುಮನವೇ ನಿನಗಾಗಿ

    ಹೆಣ್ಣು: ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ?
    ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ

     
    Last edited: Mar 26, 2009

Share This Page